ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್), ಕೊಪ್ಪಳ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ

wrappixel kit

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್), ಕೊಪ್ಪಳ

          ಶೈಕ್ಷಣಿಕ ಆಡಳಿತದ ವಿಕೇಂದ್ರೀಕರಣದ ದೃಷ್ಟಿಯಿಂದ ಕೊಪ್ಪಳ ಜಿಲ್ಲೆಯಲ್ಲಿ ಡಯಟ್ 2005ರಲ್ಲಿ ಆರಂಭವಾಯಿತು. ಜಿಲ್ಲಾ ಹಂತದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರಿಗೆ ತರಬೇತಿಗಳು, ಗುಣಮಟ್ಟದ ಶಿಕ್ಷಣಕ್ಕಾಗಿ ರಾಜ್ಯ ಹಂತದ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುವುದು, ಅಧ್ಯಯನ ಹಾಗೂ ಸಂಶೋಧನೆಗಳನ್ನು ನಡೆಸುವುದು, ವಾರ್ಷಿಕ ಯೋಜನೆಗಳನ್ನು ತಯಾರಿಸಿ ಡಿ.ಎಸ್.ಇ.ಆರ್.ಟಿ ಹಾಗೂ ಎಸ್.ಎಸ್.ಕೆ ಗಳಿಗೆ ರವಾನಿಸುವುದು, ರಾಜ್ಯ ಹಂತದ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ, ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗೆ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ ಪ್ರೌಢ ಶಾಲೆಗಳಲ್ಲಿ ಅನುಷ್ಠಾನಗೊಳಿಸುವುದು, ಶೈಕ್ಷಣಿಕ ಮೌಲ್ಯಮಾಪನ, ತಪಾಸಣೆ ಹಾಗೂ ಕಾಲ ಕಾಲಕ್ಕೆ ಶಾಲೆಗಳಿಗೆ ಭೇಟಿ ನೀಡಿ ಸೂಕ್ತ ಸಲಹೆ ಮಾರ್ಗದರ್ಶನಗಳನ್ನು ನೀಡುತ್ತಾ ಜಿಲ್ಲೆಯಲ್ಲಿ ಒಟ್ಟಾರೆ ಪರಿಣಾಮಕಾರಿಯಾಗಿ ಹಾಗೂ ಗುಣಾತ್ಮಕವಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಗಳನ್ನು ಉಚ್ಛ ಮಟ್ಟದಲ್ಲಿ ಎತ್ತರಿಸಿ ವಿಸ್ತರಿಸಿ ಜಿಲ್ಲೆಯ ಶಿಕ್ಷಣ ವ್ಯವಸ್ಥೆಯನ್ನು  ಗುಣಾತ್ಮಕವಾಗಿ ಹೆಚ್ಚಿಸುವ ನಿಟ್ಟಿನಲ್ಲಿ ಡಯಟ್ ಕಾರ್ಯೋನ್ಮುಖವಾಗಿದೆ.

          ಡಯಟ್ ನ ಮುಖ್ಯಸ್ಥರಾಗಿ ಪ್ರಾಂಶುಪಾಲರು ಹಾಗೂ ಪದನಿಮಿತ್ತ ಉಪನಿರ್ದೇಶಕರು (ಅಭಿವೃದ್ಧಿ), ಆರು(06) ಜನ ಹಿರಿಯ ಉಪನ್ಯಾಸಕರು, ಒಂಭತ್ತು(09) ಉಪನ್ಯಾಸಕರು ಇವರೆಲ್ಲರು ಶಿಕ್ಷಕ ಸಿಬ್ಬಂದಿಗಳಾದರೆ  ಶಿಕ್ಷಕೇತರ ಸಿಬ್ಬಂದಿಗಳಾಗಿ, ಮೂರು(03) ಜನ ಅಧೀಕ್ಷಕರು, ಇಬ್ಬರು(02) ಪ್ರ.ದ.ಸ, ಇಬ್ಬರು(02) ದ್ವಿ.ದ.ಸ, ಇಬ್ಬರು(02) ತಾಂತ್ರಿಕ ಸಹಾಯಕರು, ಒಬ್ಬರು(01) ಎ.ಎಸ್.ಒ ಹಾಗೂ ನಾಲ್ವರು(04) ಪರಿಚಾಕರು ಇವರುಗಳ ಮೂಲಕ ಡಯಟ ಕಾರ್ಯನಿರ್ವಹಿಸುತ್ತಿದೆ.

    ಡಯಟ ನಲ್ಲಿ ಪಿ.ಎಸ್.ಟಿ.ಇ ವಿಭಾಗದಲ್ಲಿ ಡಿ.ಎಲ್.ಇ.ಡಿ ತರಬೇತಿ ಕಾರ್ಯಕ್ರಮ ಪ್ರಾಥಮಿಕ ಶಾಲಾ ಶಿಕ್ಷಕರಾಗುವವರಿಗೆ ಎರಡು ವರ್ಷಗಳ ತರಬೇತಿ ನಡೆಯುತ್ತಿದ್ದು ಈ ವಿಭಾಗದಲ್ಲಿ ಮುಖ್ಯಸ್ಥರಾಗಿ ಒಬ್ಬರು(01) ಹಿರಿಯ ಉಪನ್ಯಾಸಕರು, ಐದು(05) ಜನ ವಿಷಯ ಉಪನ್ಯಾಸಕರು, ಒಬ್ಬರು(01) ವೃತ್ತಿ ಶಿಕ್ಷಣ ಉಪನ್ಯಾಸಕರು ಹಾಗೂ ಒಬ್ಬರು(01) ಪ್ರಥಮ ದರ್ಜೆ ಸಹಾಯಕರ ಮೂಲಕ ಪರಿಚಾರಕರ ನೆರವಿನಿಂದ ಈ ವಿಭಾಗವು ಕಾರ್ಯ ನಿರ್ವಹಿಸುತ್ತಿದೆ.

ಮತ್ತಷ್ಟು ಓದಿ

ಸರ್ಕಾರದ ಆದೇಶಗಳು, ಸುತ್ತೋಲೆಗಳು & ಡೌನ್‌ಲೋಡ್‌ಗಳು

×
ABOUT DULT ORGANISATIONAL STRUCTURE PROJECTS